ಎಸ್.ಎಸ್.ಎಲ್.ಸಿ ನಂತರ ಮುಂದೇನು?

ಎಸ್.ಎಸ್.ಎಲ್.ಸಿ ನಂತರ ಮುಂದೇನು?

     ಹತ್ತನೇ ತರಗತಿಯ ನಂತರ ಕೆರಿಯರ್‌ ಆಯ್ಕೆ ಪ್ರತಿ ವಿದ್ಯಾರ್ಥಿಯ ಜೀವನದಲ್ಲಿ ಒಂದು ಪ್ರಮುಖವಾದ ಘಟ್ಟ. ನಿಮ್ಮಲ್ಲಿ ಕೆಲವರಿಗೆ ಮುಂದೆ ಏನು ಮಾಡಬೇಕೆಂಬುದರ ಬಗ್ಗೆ ನಿರ್ದಿಷ್ಟವಾದ ನಿಲುವಿದ್ದರೆ, ಇನ್ನೂ ಕೆಲವರಲ್ಲಿ ಮುಂದೆ ಏನು ಮಾಡಬೇಕೆಂಬ ಸ್ಪಷ್ಟವಾದ ಮಾಹಿತಿ ಇರುವುದಿಲ್ಲ. ಹಾಗಾಗಿ ಅನೇಕ ಗೊಂದಲಗಳಿಂದ ಸಾಕಷ್ಟು ವಿದ್ಯಾರ್ಥಿಗಳು ತಪ್ಪಾದ ಕೋರ್ಸಗಳನ್ನು ಆಯ್ಕೆ ಮಾಡುತ್ತಾರೆ.

     ಈ ಲೇಖನವು ನಿಮಗೆ ಸೂಕ್ತವಾಗಿರುವ ಕೋರ್ಸ/ಕೆರಿಯರ್‌ ಆಯ್ಕೆ ಮಾಡಲು ಒಂದಷ್ಟು ಸಹಾಯ ಮಾಡುತ್ತದೆ. ಆದ್ದರಿಂದ ಕೆಳಗೆ ಕೊಟ್ಟಿರುವಂತಹ ಅಂಶಗಳನ್ನು ವಿವರವಾಗಿ ಓದಿ. ಸೂಕ್ತವಾದ ವಿಷಯವನ್ನು ಆಯ್ಕೆ ಮಾಡಿಕೊಳ್ಳಿರಿ. ಯಾವುದೇ ವಿಷಯ/ಕೋರ್ಸ ಆಯ್ಕೆ ಮಾದಿಕೊಳ್ಳುವದಕ್ಕಿಂತ ಮುಂಚೆ ಕೆಲವು ಪ್ರಮುಖ ಅಂಶಗಳನ್ನು ಗಮನದಲ್ಲಿಟ್ಟುಕೊಂಡಿರಬೇಕು.

ಮೊದಲನೆಯದಾಗಿ ನಿಮ್ಮ ಸಾಮರ್ಥ್ಯ ಮತ್ತು ದೌರ್ಬಲ್ಯಗಳ ಬಗ್ಗೆ ತಿಳಿಯಿರಿ:

     ಇತ್ತೀಚಿನ ದಿನಗಳಲ್ಲಿ ಪ್ರತಿಯೊಂದು ಕ್ಷೇತ್ರದಲ್ಲಯೂ ಹೇರಳವಾದ ಅವಕಾಶಗಳಿವೆ. ಆದರೆ ನಿಮ್ಮ ಸಾಮರ್ಥ್ಯ ಮತ್ತು ಆಸಕ್ತಿಗಳ ಅನುಗುಣವಾಗಿ ವಿಷಯ/ ಕೋರ್ಸಗಳ ಆಯ್ಕೆ ಮಾಡಬೇಕಿದೆ. ನಿಮಗೆ ಆಸಕ್ತವಾದ ವಿಷಯ/ಕೋರ್ಸ ಆಯ್ಕೆ ಮಾಡಿಕೊಂಡ ನಂತರ ಆ ವಿಷಯವನ್ನು ಅಭ್ಯಸಿಸಲು ನಿಮ್ಮಲ್ಲಿ ಅವಶ್ಯಕವಾದ ಸಾಮರ್ಥ್ಯ ಇದೇಯೇ ಎಂಬುದನ್ನು ಗಮನಿಸಿ. ಕೇವಲ ಆಸಕ್ತಿಯಿಂದ ವಿಷಯದ ಆಯ್ಕೆ ಮಾಡಿಕೊಂಡರೆ ಆ ಒಂದು ವಿಷಯದಲ್ಲಿ ಅಗತ್ಯವಾಗಿರುವ ಕೌಶಲ್ಯವನ್ನು ಅಭಿವೃದ್ಧಿಪಡಿಸಿಕೊಳ್ಳಲು ಸಾಧ್ಯವಾಗದೇ ಇರಬಹುದು. ಆದ್ದರಿಂದ ಆತ್ಮಾವಲೋಕನ(self assessment) ಅತೀ ಅವಶ್ಯಕವಾಗಿದೆ. ನಿಮಗೆ ಯಾವ ವಿಷಯದಲ್ಲಿ ಒಳ್ಳೆಯ ಹಿಡಿತವಿದೆ / ಒಳ್ಳೆಯ ಹಿಡಿತವಿಲ್ಲ ಎಂಬುದರ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಿ.

ಕೆರಿಯರ್‌ ಕೌನ್ಸಲಿಂಗ್‌ (ವೃತ್ತಿ ಸಮಾಲೋಚನೆ)

     ಕೆರಿಯರ್‌ ಆಯ್ಕೆ ಮಾಡಿಕೊಳ್ಳುವಾಗ ವಿದ್ಯಾರ್ಥಿಗಳಿಗೆ ಸಾಕಷ್ಟು ಗೊಂದಲಗಳಿರುತ್ತವೆ. ನಾವು ಆಯ್ಕೆ ಮಾಡುವ ಕೋರ್ಸನಲ್ಲಿ ಎಷ್ಟು ಆಯ್ಕೆಗಳಿವೆ ಹಾಗೂ ಭವಿಷ್ಯದಲ್ಲಿ ಆ ಕೋರ್ಸಗೆ ಸ್ಕೋಪ್‌ ಇದೆಯೋ ಇಲ್ಲ? ಈ ತರಹದ ನಿಮ್ಮ ಗೊಂದಲಗಳಿಗೆ ಕೆರಿಯರ ಕೌನ್ಸಿಲರ್‌ ಅಥವಾ ವೃತ್ತಿ ಸಲಹೆಗಾರರು ಸೂಕ್ತವಾದ ಸಲಹೆಗಳನ್ನು ನೀಡುತ್ತಾರೆ. ನಿಮ್ಮ ಆಸಕ್ತ ಕೆರಿಯರ್‌ನಲ್ಲಿ ಯಶಸ್ವಿಯಾಗಲು ವ್ಯವಸ್ಥಿತವಾದ ಯೋಜನೆಯ ಅವಶ್ಯಕವಾಗಿದೆ. ಆ ಒಂದು ಯೋಜನೆ ರೂಪಿಸಲು ಕೆರಿಯರ್‌ ಕೌನ್ಸಿಲರ್‌ ನಿಮಗೆ ಸಹಾಯ ಮಾಡುತ್ತಾರೆ.

ಸರಿಯಾದ ವಿಷಯ/ಕೋರ್ಸನ ಆಯ್ಕೆ

       ಯಾವುದೇ ವಿಷಯ/ಕೋರ್ಸ್ ಆಯ್ಕೆ ಮಾಡುವುದಕ್ಕಿಂತ ಮುಂಚಿತವಾಗಿ ಆ ಒಂದು ಕೋರ್ಸ್‌ ಬಗ್ಗೆ ವಿವರವಾಗಿ ಎಲ್ಲ ಅಂಶಗಳನ್ನು ತಿಳಿದುಕೊಂಡಿರಬೇಕು. ಎಸ್.ಎಸ್.ಎಲ್.ಸಿ ನಂತರ ಮಾಡಬಹುದಾದ ಕೆಲವು ಕೋರ್ಸಗಳ ಮಾಹಿತಿ ಇಲ್ಲಿ ವಿವರಿಸಲಾಗಿದೆ.

ಅತ್ಯಂತ ಪ್ರಮುಖವಾಗಿ ಗಮನಿಸಬೇಕಾದ ಅಂಶಗಳು

       ನೀವು ನಿರ್ದಿಷ್ಟ ವಿಷಯ/ಕೋರ್ಸ ಆಯ್ಕೆ ಮಾಡಿಕೊಳ್ಳುವುದರ ಜೊತೆಗೆ ಸಾಫ್ಟ ಸ್ಕಿಲ್‌ಗಳ ಕಡೆಗೂ ಗಮನ ಹರಿಸುವುದು ಅತ್ಯಂತ ಮುಖ್ಯವಾಗಿದೆ. ತಮ್ಮ ಆಸಕ್ತಿಯ ವಿಷಯ/ಕೋರ್ಸ ಆಯ್ಕೆ ಮಾಡಿಕೊಂಡು ಅತೀ ಹೆಚ್ಚು ಅಂಕಗಳನ್ನು ಗಳಿಸಿದಂತಹ ಸಾಕಷ್ಟು ವಿದ್ಯಾರ್ಥಿಗಳು, ಸಾಫ್ಟ ಸ್ಕಿಲ್‌ ಇಲ್ಲದಿರುವ ಕಾರಣ ಅವಕಾಶಗಳಿಂದ ವಂಚಿತರಾಗಿರುವಂತಹ ಅದೆಷ್ಟೋ ಉದಾಹರಣೆಗಳಿವೆ. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಸಾಫ್ಟ ಸ್ಕಿಲ್‌ಗಳಿಗೆ ಅತಿಯಾದ ಬೇಡಿಕೆಯಿದೆ. ಇದು ನಿಮ್ಮನ್ನು ಇತರರಿಗಿಂತ ವಿಭಿನ್ನವಾಗಿರಿಸಲು ಸಹಕರಿಸುತ್ತದೆ. ಸಾಫ್ಟ ಸ್ಕಿಲ್‌ಗಳ ಕಲಿಕೆಯನ್ನು ಆದಷ್ಟು ಬೇಗನೆ ಶುರು ಮಾಡಿದರೆ ತುಂಬ ಅನುಕೂಲಕರ. ಕೆಲ ಸಾಫ್ಟ ಸ್ಕಿಲ್‌ಗಳನ್ನು ಈ ಕೆಳಗೆ ಪಟ್ಟಿ ಮಾಡಲಾಗಿದೆ.

೧) ಸಂವಹನ ಕೌಶಲ್ಯ (Communication Skill)

೨) ಪರಸ್ಪರ ಸಂವಹನ ಕೌಶಲ್ಯ (Interpersonal Skill)

೩) ಒಂದಕ್ಕಿಂತ ಹೆಚ್ಚು ಭಾಷೆಗಳನ್ನು ಕಲಿಯುವುದು (Learning more than one language)

೪) ಹೆಚ್ಚಾಗಿ ಓದುವಿಕೆಯನ್ನು ರೂಢಿಸಿಕೊಳ್ಳುವುದು (Reading more)

೫) ವಿಮರ್ಶಾತ್ಮಕ ಚಿಂತನೆ ಮತ್ತು ವಿಶ್ಲೇಷಣೆ (Critical Thinking and Analysis)

6) ತಂಡದ ನಿರ್ವಹಣೆ ಮತ್ತು ನಾಯಕತ್ವ (Team management and Leadership)

            ಯಾವ ವಿಷಯ/ಕೋರ್ಸ ಆಯ್ಕೆ ಮಾಡಬೇಕೆಂಬುದು ಅತ್ಯಂತ ಪ್ರಮುಖವಾದ ವಿಚಾರವಾಗಿದ್ದು ಇದನ್ನು ಲಘುವಾಗಿ ಪರಿಗಣಿಸದೆ ಸೂಕ್ತವಾದ ಕೆರಿಯರ್‌ ಆಯ್ದುಕೊಳ್ಳಿರಿ.

Leave a Comment